ಜಿ.ಸಿ.ಡಿ ಭಾರತಿ (ಭಾರತಿ ಬಂಧು) ಅವರು ಕಬೀರ ಭಜನೆಗಳಿಗೆ ಹೆಸರುವಾಸಿಯಾದ ಭಾರತೀಯ ಸಂಗೀತಗಾರರಾಗಿದ್ದಾರೆ. == ಆರಂಭಿಕ ಜೀವನ == ಅವರು ಏಪ್ರಿಲ್ 15 ರಂದು ಭಾರತದ ಛತ್ತೀಸ್‌ಗಢದ ರಾಯ್‌ಪುರದಲ್ಲಿ ವಿಧ್ಯಾಧರ್ ಗೈನಾ ಭಾರತಿ ಯವರ ಪುತ್ರನಾಗಿ ಜನಿಸಿದರು. ತಂದೆಯಿಂದ ಆರಂಭಿಕ ಸಂಗೀತ ಶಿಕ್ಷಣ ಅಭ್ಯಾಸದ ನಂತರ , ಉಸ್ತಾದ್ ಆಶಿಕ್ ಅಲಿ ಖಾನ್ ಅವರಲ್ಲಿ ಗಜಲ್, ಠುಮ್ರಿ , ದಾದ್ರಾ ಮತ್ತು ಉಸ್ತಾದ್ ಹಾಜಿ ಈದ್ ಅಲಿ ಶಾ ಚಿಶ್ತಿ ಅವರ ಅಡಿಯಲ್ಲಿ ಸೂಫಿ ಸಂಗೀತವನ್ನು ತರಬೇತಿ ಮಾಡಿದರು. == ಹಿನ್ನೆಲೆ == ಭಾರತಿ ಯವರು ಛತ್ತೀಸ್‌ಗಢದ ರಾಯ್‌ಪುರ ಮೂಲದ ಭಾರತೀಯ ಸಂಗೀತ ತಂಡವಾದ ಭಾರತಿ ಬಂಧು ಗ್ರೂಪ್‌ನ ಪ್ರಮುಖ ಗಾಯಕರಾಗಿದ್ದಾರೆ. ಭಾರತಿ ಬಂಧು ಗ್ರೂಪ್‌ನ ಇತರ ಸದಸ್ಯರುಗಳು ವಿವೇಕಾನಂದ ಭಾರತಿ, ಜಿ ರಮಾನಂದ ಭಾರತಿ ಮತ್ತು ಸಿ ವಿದ್ರುಮ್ನಾ ವಾಚಸ್ಪತಿ ಭಾರತಿ. ಇವರ ಕುಟುಂಬವು ತಮ್ಮದೇ ಆದ ವಿನೂತನಶೈಲಿಯನ್ನು ಅಭಿವೃದ್ಧಿಪಡಿಸಿ ಅಭ್ಯಸಮಾಡುತ್ತಿದೆ. ಇವರ ತಂಡವು ನಾಲ್ಕು ಛತ್ತೀಸ್‌ಗಢಿ ಚಲನಚಿತ್ರಗಳಾದ ಪಿರಿತ್ ಕೆ ಜಂಗ್, ಛತ್ತೀಸ್‌ಗಢ ಮಹಾತಾರಿ, ರಾಮ್ ಮಿಲಾಹಿ ಜೋಡಿ ಮತ್ತು ಮುಕ್ತಿರಾಮ್‌ಗಳಲ್ಲಿ ಸಂಗೀತಗಾರರಾಗಿದ್ದಾರೆ. ಭಾರತಿ ಬಂಧು ಸೂಫಿ ಹಾಡುಗಳನ್ನು ಮತ್ತು ಕಬೀರನ ಪದ್ಯಗಳನ್ನು ಹಾಡುತ್ತಾರೆ. ಇವರ ತಂಡವು ಭಾರತದಲ್ಲಿ ಸರಿ ಸುಮಾರು 6000 ಪ್ರದರ್ಶನಗಳನ್ನು ನೀಡಿದೆ. . ಗುಂಪಿನ ಸದಸ್ಯರು ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. == ಪ್ರಶಸ್ತಿಗಳು == ಭಾರತಿ ಅವರನ್ನು ಭಾರತ ಸರ್ಕಾರವು 2013 ರಲ್ಲಿ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯೊಂದಿಗೆ ಗೌರವಿಸಿತು. == ಬಾಹ್ಯ ಕೊಂಡಿಗಳು == ಅಧಿಕೃತ ಜಾಲತಾಣ 2019-12-15 ವೇಬ್ಯಾಕ್ ಮೆಷಿನ್ ನಲ್ಲಿ. <" ". . 2014. 18 2014. 18 2014. ಭಾರತಿ ಬಂಧು. 2014. 18 ಡಿಸೆಂಬರ್ 2014 ರಂದು ಮೂಲದಿಂದ 2014-12-18 ವೇಬ್ಯಾಕ್ ಮೆಷಿನ್ ನಲ್ಲಿ. ಆರ್ಕೈವ್ ಮಾಡಲಾಗಿದೆ . 18 ಡಿಸೆಂಬರ್ 2014 ರಂದು ಮರುಸಂಪಾದಿಸಲಾಗಿದೆ . ಭಾರತಿ ಬಂಧು | ಅಂಡರ್‌ಸ್ಕೋರ್ ದಾಖಲೆಗಳು == ಉಲ್ಲೇಖಗಳು ==